Mallamma Nudi

ಉದ್ಯಾನವನ ಜಾಗವನ್ನು ತೆರವುಗೊಳಿಸದೆ ಹೋದರೆ ಉಗ್ರವಾದ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ಶಿವು ದೊಡ್ಮನಿ

2nd April 2025

News image

ಶಹಾಪುರ ತಾಲೂಕಿನ ಹಳಿಸಗರ

ಗ್ರಾಮದ ಸರ್ವೆ ನಂ: 526/6 ರ ಮೋಟಗಿ ರೆಸಿಡೆನ್ಸಿ ಮಾಲೀಕರು ಕಟ್ಟಡ ನಿರ್ಮಿಸಿ, ವಾಣಿಜ್ಯ ಉದ್ದೇಶಗಳಿಗೆಬಳಸಿಕೊಳ್ಳುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸಿ ಜಾಗವನ್ನುತೆರವುಗೊಳಿಸಿ, ನಾಗರಿಕರ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅನೇಕ ಬಾರಿ ಮಾನ್ಯ

ಪೌರಾಯುಕ್ತರಿಗೆ ದೂರು ನೀಡಿದ್ದರೂ ಸಹ, ಒತ್ತುವರಿ ಜಾಗವನ್ನು ತೆರವುಗೊಳಿಸಲು

ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರದ ಆಸ್ತಿ ಉಳಿಸಿಕೊಳ್ಳಲು ಅಧಿಕಾರಿಗಳು ಏಕೆ ಆಸಕ್ತಿ ವಹಿಸುತ್ತಿಲ್ಲ. ಅಧಿಕಾರಿಗಳು

ಯಾವುದಾದರೂ ಆಮಿಷಕ್ಕೆ ಕಟ್ಟಡ ನಿರ್ಮಿಸಿ ವಾಣಿಜ್ಯ ಕಟ್ಟಡವಾಗಿರುವುದರಿಂದ ಕೂಡಲೇ ಆ ಜಾಗವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೂ ಹಾಗೂ ನಗರಪಾಲಿಕರಿಗೆ ಮನವಿ ಸಲ್ಲಿಸಲಾಗಿದೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳಿಗೆ ಒಂದು ವಾರದೊಳಗೆ ಗೊಳಸದೆ ಇದ್ದರೆ ಹೋರಾಟ ಮಾಡುವುದಾಗಿ ಶಿವು ದೊಡ್ಡಮನಿ ಪತ್ರಿಕೆಗೆ ತಿಳಿಸಿದ್ದಾರೆ.

Comments
Show comments
ಸಂಬಂಧಿತ ಲೇಖನಗಳು
ಮಲ್ಲಮ್ಮ ನುಡಿ ವಾರ್ತೆ
5th April 2025

ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದರ 370ಕ್ಕೆ ಹೆಚ್ಚಳ ಸಮಾನ ಕೆಲಸಕ್ಕೆ ಸಮಾನ ಕೂಲಿ ಮಹಿಳಾ ಮತ್ತು ಪುರುಷರಿಗೆ ಸಮಾನ ಕೂಲಿ:

ಮಲ್ಲಮ್ಮ ನುಡಿ ವಾರ್ತೆ
5th April 2025

ಬೇಸಿಗೆ ನಿಮಿತ್ಯ ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕುರಿತು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಜರುಗಿದ ತಾಲೂಕು ಮಟ್ಟದ ಸಭೆ

ಮಲ್ಲಮ್ಮ ನುಡಿ ವಾರ್ತೆ
5th April 2025

ಬಸವ ಧರ್ಮ ಸಂಸತ್ತು ವ್ಯವಸ್ಥಿತವಾಗಿರಲಿ : ಡಿಸಿ ಜಾನಕಿ

ಮಲ್ಲಮ್ಮ ನುಡಿ ವಾರ್ತೆ
5th April 2025

ಪ್ರಜ್ವಲ್‌ಗೆ ರಾಜ್ಯಮಟ್ಟದ ಪ್ರಶಸ್ತಿ

ಮಲ್ಲಮ್ಮ ನುಡಿ ವಾರ್ತೆ
5th April 2025

ಗೊಂದಲದ ಗೂಡಾದ ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ರಚನೆ

ಮಲ್ಲಮ್ಮ ನುಡಿ ವಾರ್ತೆ
5th April 2025

ತುಂಗಭದ್ರಾ ಎಡದಂಡೆ ಕಾಲುವೆ ಮೇಲೆ 24 ತಾಸು ನಿಗಾವಹಿಸಿ- ಪ್ರಾದೇಶಿಕ ಆಯುಕ್ತ ಎಂ.ಸುಂದರೇಶ ಬಾಬು

ಪ್ರಕಾಶಕರು
Ramesh Reddy